ಕಡಲ ತೀರ ನೋಡಲು ಎಷ್ಟು ಸುಂದರವೋ ಮಳೆಗಾಲದಲ್ಲಿ ಅಷ್ಟೇ ಭಯಾನಕ ಅನುಭವ ನೀಡುತ್ತದೆ, ಬೋರ್ಗೆಯುವ ಕಡಲು, ಬೀಸುವ ರಭಸದ ಗಾಳಿಯ ಬೀಕರತೆಯ ನಡುವೆಯೂ ಬದುಕುವ ಕಡಲ ತೀರದ ನಿವಾಸಿಗರ ನಿದ್ದೆಗೆಡಿಸುವ ಕಡಲ್ಕೋರೆತ ನಿರಂತರವಾಗಿ ಸಾಗರೊಳಗೆ ಭೂಮಿಯನ್ನು ಸೇರಿಸುತ್ತಾ ತನ್ನ ವಿಸ್ತಾರತೆಯನ್ನು ಹೆಚ್ಚಿಸುತ್ತಾ ಬರುತ್ತಿದೆ, ಕಡಲ್ಕೋರೆತ ಉಂಟಾದಾಗ ಅವೈಜ್ಞಾನಿಕ ರೀತಿಯಲ್ಲಿ ಕಲ್ಲು ಬಂಡೆಗಳನ್ನು ಸುರಿದು ತಾತ್ಕಾಲಿಕ ಪರಿಹಾರಕ್ಕಾಗಿ ಕೋಟ್ಯಾಂತರ ರೂಪಾಯಿ ಅನುದಾನವನ್ನು ದುಂದುವೆಚ್ಚ ಮಾಡುವುದನ್ನು ಮನಗಂಡು ವ್ಯವಸ್ಥಿತವಾಗಿ ಮಳೆಗಾಲಕ್ಕೂ ಪೂರ್ವಭಾವಿಯಾಗಿ ಶಾಶ್ವತ ತಡೆಗೋಡೆ ಮತ್ತು ಕಡಲ್ಕೋರೆತ ತಡೆಯುವ ಕಾಮಗಾರಿಯನ್ನು ನಡೆಸಲು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕ್ರಮವಹಿಸಲಾಗಿದೆ…

ಈ ಕಾಮಗಾರಿ ಪ್ರಾರಂಭವಾದ ಸಂದರ್ಭದಲ್ಲಿ ಕಾಮಗಾರಿಯ ಗುಣಮಟ್ಟ ಪರೀಶೀಲನೆಗೂ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಗರಿಷ್ಟ ಗುಣಮಟ್ಟ ಮತ್ತು ವ್ಯವಸ್ಥಿತ ಕಾಮಗಾರಿಗೆ ಕ್ರಮಕೈಗೊಂಡು ಉಡುಪಿ ವಿಧಾನಸಭಾ ಕ್ಷೇತ್ರದ ಕಡಲ ತೀರದಲ್ಲಿ ಕಡಲ್ಕೋರೆತ ಆಗದಂತೆ ನೋಡಿಕೊೂಳ್ಳುವ ಮೂಲಕ ಕಾಮಗಾರಿ ಪೂರ್ಣಗೊೂಳಿಸಲು ಕ್ರಮವಹಿಸಲಾಗಿತ್ತು.

Latest Portfolio

Need Any Help? Or Looking For an Agent

Working Hours : Sun-monday, 09am-5pm