ವಿದ್ಯುತ್ ಕಣ್ಣಾ ಮುಚ್ಚಾಲೆ ರಾಜ್ಯದಲ್ಲಿ ಎಲ್ಲರಿಗೂ ಸಮಸ್ಯೆ ಉಂಟುಮಾಡುತ್ತಿರುತ್ತದೆ, ಆದರೆ ಶಾಸಕರಾಗಿ ತಮ್ಮ ಕ್ಷೇತ್ರಕ್ಕೆ ಅಡಚಣೆ ರಹಿತ ವಿದ್ಯುತ್ ಸರಬರಾಜು ಮಾಡಿಸಲೇಬೇಕು ಎನ್ನುವ ಪಣ ತೊಟ್ಟು,
ಉಡುಪಿ ತಾಲೂಕಿನಲ್ಲಿ ಯಾವುದೇ ವಿದ್ಯುತ್ ಕಳ್ಳತನದ ಪ್ರಕರಣಗಳು ಕನಿಷ್ಟವಿದ್ದು, ಕೃಷಿ ಪಂಪ್ಸೆಟ್ಟುಗಳ ವಿದ್ಯುತ್ ಬಳಕೆಯು ಕಡಿಮೆ ಇದ್ದು ಅನಧೀಕೃತ ನೀರಾವಾರಿ ಪಂಪ್ಸೆಟ್ಟುಗಳು ಇಲ್ಲದಿರುವುದನ್ನು ಪರಿಗಣಿಸಿ ತಾಲೂಕಿನಲ್ಲಿ ಉಷ್ಣವಿದ್ಯುತ್ ಸ್ಥಾವರದಲ್ಲಿ ಪೂರ್ಣಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುವ ಸಮಯದಲ್ಲಿ , ಉಡುಪಿ ತಾಲೂಕಿಗೆ ತಾಂತ್ರಿಕ ಸಮಸ್ಯೆಗಳು ಮತ್ತು ದುರಸ್ತಿ ಹೊೂರತುಪಡಿಸಿ ಲೋಡ್ ಶೆಡ್ಡಿಂಗ್ ಮಾಡದಂತೆ ನಿರಂತರ ಅಡಚಣೆ ರಹಿತ 24 ತಾಸು ವಿದ್ಯುತ್ ಸರಬರಾಜಿಗೆ ಮನವಿ ಮಾಡಿ, ರಾಜ್ಯ ಮತ್ತು ದೇಶದ ಇತಿಹಾಸದಲ್ಲೇ ಮೊದಲು ಎಂಬಂತೆ ರಾಜ್ಯ ಸರ್ಕಾರದಿಂದ ಮೆಸ್ಕಾಂ ಇಲಾಖೆಯ ಮುಖೇನ ಅಧೀಕೃತ ಆದೇಶ ಹೊರಡಿಸಿ ಇಲಾಖೆಯ ಮೇಲೆ ಒತ್ತಡ ಹೇರಿ ತಾನು ಶಾಸಕನಾಗಿದ್ದ ಅವಧಿಯವರೆಗೂ ಈ ಆದೇಶ ಪಾಲನೆಯಾಗುವಂತೆ ನೋಡಿಕೊಂಡ ಜನಪ್ರತಿನಿಧಿ ಪ್ರಮೋದ್ ಮಧ್ವರಾಜ್ ಎಂಬುದನ್ನು ಜನತೆ ಮರೆಯುುಂತಿಲ್ಲ…