ಉಡುಪಿ ನಗರಸಭಾ ವ್ಯಾಪ್ತಿಯ ಮಲ್ಪೆ-ಪಡುಕೆರೆ ಜನತೆಯ ಕನಸು ನನಸಾಯಿತು…..
ನೀವು ನನಗೆ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಕರ್ನಾಟಕ ಸರಕಾರದಿಂದ ಮಂಜೂರು ಮಾಡಿದ 16.81ಕೋಟಿ ರೂ ಅನುದಾನದಲ್ಲಿ ನಿರ್ಮಿಸಲಾದ ಸೇತುವೆಯನ್ನು ಲೋಕಾರ್ಪಣೆಗೋಳಿಸಲಾಯಿತು…
ಸಮುದ್ರ ದ ತಟದಲ್ಲಿ ಜನಸಾಗರವು ಸೇರಿ ಈ ಸೇತುವೆ ಕೇವಲ ಎರಡು ತೀರಗಳನ್ನು ಮಾತ್ರ ಸಂಪರ್ಕಿಸುವುದಲ್ಲ ಇದು ಸಮಸ್ತ ಮಲ್ಪೆ ಪಡುಕೆರೆಯ ಜನತೆಯ ಹ್ರದಯವನ್ನು ಸಂಪರ್ಕಿಸುವಂತೆ ಮಾಡಿದೆ….
ಮೊದಲಿಗೆ ಪಡುಕೆರೆ ಭಾಗದ ಜನರು ದೋಣಿಯ ಮೂಲಕ ಇಲ್ಲವೇ ಮಟ್ಟು ಕಟಪಾಡಿಯ ಮೂಲಕ ಹಲವು ಕಿ.ಮೀ ಕ್ರಮಿಸಿ ಉಡುಪಿಯನ್ನು ತಲುಪಿ ತಮ್ಮ ವಿದ್ಯಾಬ್ಯಾಸ, ಉದ್ಯೋಗ. ಮತ್ತು ಆರೋಗ್ಯ ಸೇವೆಯನ್ನು ಪಡೆಯುವ ಅಗತ್ಯತೆ ಇತ್ತು..
ರಾತ್ರಿ ಸಮಯದಲ್ಲಿ ಹೃದಯ ಸಂಬಂದಿತ ಕಾಯಿಲೆಗಳು, ಗರಭಿಣಿ ಮಹಿಳೆಯರು ಸೇರಿದಂತೆ ಹಲವು ರೀತಿಯಲ್ಲಿ ತೀರಾ ಸಮಸ್ಯೆಗಳು ಉಂಟಾಗುತ್ತಿತ್ತು …ಪಡುಕೆರೆಯ ಜನತೆಗೆ ನೀಡಿದ ಭರವಸೆಯನ್ನು ಸೇತುವೆ ನಿರ್ಮಿಸಿ ಈಡೇರಿಸಿದ ಸಾರ್ಥಕತೆ ಪ್ರಮೋದ್ ಮಧ್ವರಾಜ್ ರವರ ಮನದಲ್ಲಿ ಮಂದಹಾಸ ಮೂಡಿಸಿದೆ.
Pramod Madhwaraj