ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನಕ್ಕೊಳಪಡುವ ಸರ್ಕಾರಿ ಉಪಕರಣಗಳು ಮತ್ತು ತರಬೇತಿ ಕೇಂದ್ರದ ನಿರ್ಮಾಣ, ಉಡುಪಿಯ ಉಪ್ಪೂರಿನಲ್ಲಿ ಯೋಜನೆಯ ಅನುಷ್ಟಾನ
ಉಡುಪಿ ಜಿಲ್ಲೆಯು ಶೈಕ್ಷಣಿಕವಾಗಿ ರಾಜ್ಯದಲ್ಲೇ ಉನ್ನತ ಸ್ಥಾನದಲ್ಲಿದ್ದರೂ , ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿ ಪಡೆಯಲು ಸರಕಾರಿ ಉಪಕರಣಗಾರ ತರಬೇತಿ ಕೇಂದ್ರ ಸ್ಥಾಪನೆಯಾಗದೇ ಇತರ ಜಿಲ್ಲೆಗಳಲ್ಲಿರುವ ದಾಂಡೇಲಿ, ಮಂಗಳೂರು, ಮೈಸೂರು, ಬೆಂಗಳೂರು ಮುಂತಾದೆಡೆ ತೆರಳಿ ಜಿಟಿಟಿಸಿ ಕಾಲೇಜಿನಲ್ಲಿ ಅರ್ಜಿ ಸಲ್ಲಿಸಿ, ಅಲ್ಲಿನ ಕಾಲೇಜಿನಲ್ಲಿ ನಿಗದಿತ ಸೀಟುಗಳ ಸಮಸ್ಯೆಯಿಂದಾಗಿ ನಮ್ಮ ಜಿಲ್ಲೆಯ ಪ್ರತಿಭಾವಂತರು ಈ ವೃತ್ತಿ ಶಿಕ್ಷಣದಿಂದ ವಂಚಿತರಾಗುವುದನ್ನು ಮನಗಂಡು ನಮ್ಮ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡಿರುವ ಸುಸಜ್ಜಿತ ಜಿಟಿಟಿಸಿ ಕಾಲೇಜು ಪ್ರಾರಂಭಕ್ಕೆ ಮೊದಲ ಹೆಜ್ಜೆಯನ್ನು 30/01/2014 ರಂದು ಮಾನ್ಯ ಮುಖ್ಯಮಂತ್ರಿ ಯವರಿಗೆ ಪತ್ರ ಬರೆದು ಕೊರಲಾಗಿತ್ತು.
ಈ ಕಾಲೇಜು ಸ್ಥಾಪನೆಗೆ ಬೇಕಿದ್ದ ಜಮೀನನ್ನು ಗ್ರಾಮೀಣ ಭಾಗ ಮತ್ತು ನಗರ ಪ್ರದೇಶಕ್ಕೆ ಹತ್ತಿರವಾಗುವಂತೆ ರಾಷ್ಟೀಯ ಹೆದ್ದಾರಿಯಿಂದ ಸಮೀಪವಿರುವ ಉಪ್ಪೂರಿನಲ್ಲಿ ಜಮೀನು ಗುರುತಿಸಿ 9 ಎಕ್ರೆ ಜಮೀನನಲ್ಲಿದ್ದ ಉಪ್ಪೂರಿನ ಸರ್ಕಾರಿ ಪ್ರೌಢಶಾಲೆಯ ಜಾಗದಲ್ಲಿ 5 ಎಕ್ರೆ ಜಾಗವನ್ನು ಶಿಕ್ಷಣ ಇಲಾಖೆಯಿಂದ ಜಿಟಿಟಿಸಿ ಕೇಂದ್ರದ ನಿರ್ಮಾಣಕ್ಕಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಸರಿಗೆ ಹಸ್ತಾಂತರಿಸಿ ಆದೇಶಿಸಿ ಕಾನೂನಾತ್ಮಕ ತೊಡಕನ್ನು ನಿವಾರಿಸಿ ಆದೇಶಕ್ಕೆ ಕ್ರಮವಹಿಸಲಾಗಿತ್ತು.
ವ್ಯವಸ್ಥಿತ ಮತ್ತು ಸುಸಜ್ಜಿತ ಜಿಟಿಟಿಸಿ ಕಾಲೇಜು,ವರ್ಕ್ ಶಾಪ್ ಕಟ್ಟಡ ನಿರ್ಮಾಣ ಮತ್ತು ಮೇಷಿನರಿ ಖರೀದಿಗೆ 44 ಕೋಟಿ ರೂಪಾಯಿ ಅನುದಾನವನ್ನು ವಿವಿಧ ಯೋಜನೆಯ ಮೂಲಕ ಬಿಡುಗಡೆಯ ಪ್ರಸ್ತಾವನೆಯನ್ನು ಸರಕಾರವು ಮಂಜೂರು ಮಾಡಿ ನಿರ್ಮಾಣಕ್ಕೆ ಚಾಲನೆಯನ್ನು ನೀಡಲಾಗಿತ್ತು.
5200 ಚದರ ಮೀಟರ್ ಸ್ಥಳಾವಕಾಶದಲ್ಲಿ ಜಿಟಿಟಿಸಿ ಕಾಲೇಜು ಸ್ಥಾಪನೆಯಾಗಿರುವುದರಿಂದ ಎಸ್ ಎಸ್ ಎಲ್ ಸಿ ಯ ಬಳಿಕ ಇಲ್ಲಿ ಶಿಕ್ಷಣ ಪಡೆದರೆ 100% ಉದ್ಯೋಗಾವಕಾಶ ವಿದ್ದು ಇಲ್ಲಿ ಟೂಲ್ ಆಂಡ್ ಡೈ ಮೇಕಿಂಗ್ ಡಿಪ್ಲೋಮಾ ಕೋರ್ಸ್ ಮಾತ್ರವಲ್ಲದೆ ಫಿಲ್ಟರ್, ಟರ್ನರ್, ಮಿಲ್ಲರ್, ಗ್ರೈಂಡರ್ ಇತ್ಯಾದಿ ಅಲ್ಪಾವಧಿ ಕೋರ್ಸ್ ಗಳಿಗೂ ಕೂಡ ಅವಕಾಶವನ್ನು ಕಲ್ಪಿಸಲಾಗಿದೆ.
ನಮ್ಮೂರಿನ, ನಮ್ಮ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ವಿದ್ಯಾವಂತರಾಗಿ ಸಮಾಜದಲ್ಲಿ ಆರ್ಥಿಕವಾಗಿ ಸಬಲರಾಗಿ, ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಸಹಾಯ ಮಾಡಿದಾಗ ನಾನು ಶಾಸಕ ನಾಗಿದ್ದಾಗ ಅನುಷ್ಟಾನ ಮಾಡಿದ ಇಂತಹ ಯೋಜನೆಗಳ ಬಗ್ಗೆ ಮತ್ತಷ್ಟು ಹೆಮ್ಮೆ ಪಡುವಂತಾಗುತ್ತದೆ…
-ಪ್ರಮೋದ್ ಮಧ್ವರಾಜ್
Pramod Madhwaraj