ರಾಜಕಾರಣಿಗಳೆಂದರೇ ಚುನಾವಣೆಗೆ ಬರುವ ಜನನಾಯಕರು ಎನ್ನುವ ಮಾತನ್ನು ಸುಳ್ಳು ಮಾಡಿ ತೋರಿಸಿ ಜನರಿಗಾಗಿ ಪ್ರತಿ ದಿನವೂ ಕ್ಷೇತ್ರದಲ್ಲಿ ಜನರೊಂದಿಗೆ ಅಥವಾ ಬೆಂಗಳೂರಿನಲ್ಲಿ ಜನರಿಗಾಗಿ ಶ್ರಮಿಸಿ ಜನಸೇವೆಯೆ ಜನಾರ್ಧನ ಸೇವೆ ಎನ್ನುವ ಮಾತಿಗೆ ಬೆಲೆ ಬರುವಂತಾಗಿದೆ ಎನ್ನುವ ಮತದಾರರ ಮಾತು ಪ್ರಮೋದ್ ಮಧ್ವರಾಜ್ ರವರು ಜನಪ್ರತಿನಿಧಿಯಾಗಿ ಕೆಲಸ ಮಾಡಿರುವ ಶ್ರಮಕ್ಕೆ ಸಾರ್ಥಕ ಭಾವನೆಯನ್ನು ನೀಡುತ್ತದೆ..


ಶಾಸಕ ಪ್ರಮೋದ್ ಮಧ್ವರಾಜ್ ರವರು ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಸಭಾ ಅಧಿವೇಶನದಿಂದ ಹೊರಬರುತ್ತಿರುವ ಶಾಸಕರ ಕೈಯಲ್ಲಿರುವ ಬ್ಯಾಗ್ ಗಮನಿಸಿದ್ದಿರಾ???

ಆ ಬ್ಯಾಗ್ ನ್ನು ಸರಕಾರವು ಎಲ್ಲಾ ಶಾಸಕರಿಗು ನೀಡಿದೆ ಆದರೆ ಅದನ್ನು ಉಪಯುಕ್ತ ರೀತಿಯಲ್ಲಿ ಸದ್ಬಳಕೆ ಮಾಡುತ್ತಿರುವ ಏಕೈಕ ಶಾಸಕರಿವರು..

ಅದು ಶಾಸಕರ ಬ್ಯಾಗ್ ಅಲ್ಲ ಅದು ಉಡುಪಿ ಕ್ಷೇತ್ರದ ಜನತೆಯ ಬ್ಯಾಗ್ ..

ಅದರಲ್ಲಿರುವ ಕಡತಗಳು ಸಾರ್ವಜನಿಕರಿಂದ ಸ್ವೀಕರಿಸಿದ ಅಹವಾಲುಗಳು..

ಅವುಗಳನ್ನು ತಮ್ಮ ಶಿಫಾರಸ್ಸು ಪತ್ರದೊಂದಿಗೆ ಸಂಬಂದಪಟ್ಟ ಇಲಾಖೆಯ ಸಚಿವರುಗಳಿಗೆ ಸ್ವತಃ ತಾವೇ ಬೇಟಿಯಾಗಿ, ಸಚಿವರುಗಳಿಗೆ ಸಮಸ್ಯೆಗಳ ಬಗ್ಗೆ ಮನದಟ್ಟು ಮಾಡಿಸಿ ಅವರ ಇಲಾಖೆಯಿಂದ ಅನುದಾನ ಅಥವಾ ಪರಿಹಾರ ಧನವನ್ನು ಮಂಜೂರುಮಾಡಿಸುವ ಶಾಸಕರ ಪ್ರಯತ್ನವು ನಿತ್ಯ ನಿರಂತರ...

ಮುಖ್ಯಮಂತ್ರಿ ಪರಿಹಾರ ನಿಧಿಯ ಅರ್ಜಿಗಳನ್ನು ಸ್ವತಃ ತಾವೇ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ರವರನ್ನು ಬೇಟಿಯಾಗಿ ಅವರಿಂದ ಹೆಚ್ಚಿನ ಪರಿಹಾರವನ್ನು ಸರಕಾರದಿಂದ ಮಂಜೂರು ಮಾಡಿಸಿ ಅದರೋಂದಿಗೆ ತಮ್ಮ ವಯುಕ್ತಿಕ ಸಹಾಯವನ್ನು ಸೇರಿಸಿ ಬಡವರ ಕಣ್ಣಿರೋರೆಸುತ್ತಿರುವ ಶಾಸಕರು..

ಕರ್ನಾಟಕದ ಎಲ್ಲಾ ಶಾಸಕರುಗಳ ಪೈಕಿ ಜನಸಾಮಾನ್ಯರ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡು ಹೋಗುವ ಏಕೈಕ ಶಾಸಕರು ಶ್ರೀ ಪ್ರಮೋದ್ ಮಧ್ವರಾಜ ರವರು..

Latest Portfolio

Need Any Help? Or Looking For an Agent

Working Hours : Sun-monday, 09am-5pm