ಉಡುಪಿಯ ಜನತೆಗೆ ನೀಡಿದ್ದ ಭರವಸೆ ಈಡೇರಿಸಿ ಐತಿಹಾಸಿಕ ಹೆಜ್ಜೆಯನ್ನಿಟ್ಟು ಯೋಜನೆಯ ಅನುಷ್ಟಾನವನ್ನು ಯಶಸ್ವಿಯಾಗಿ ಜಾರಿಮಾಡುವಲ್ಲಿ ಭಗಿರಥ ಪ್ರಯತ್ನ ನಡೆಸಿದ ಪ್ರಮೋದ್ ಮಧ್ವರಾಜ್..
2.60 ಎಕರೆ ವಿಸ್ತೀರ್ಣದಲ್ಲಿ ರೂ. 6.08 ಕೋಟಿ ವೆಚ್ಚದಲ್ಲಿ ನೂತನ ಬಸ್ ಘಟಕ ನಿರ್ಮಾಣಗೊಂಡಿದೆ…
ಸಾರ್ವಜನಿಕ ಸೇವೆಗೆ ಆದ್ಯತೆ ನೀಡಿ ವಿದ್ಯಾರ್ಥಿಗಳಿಗೆ, ಹಿರಿಯರಿಗೆ, ವಿಕಲಚೇತನರಿಗೆ, ನಿತ್ಯ ಪ್ರಯಾಣಿಕರಿಗೆ ರಿಯಾಯಿತಿ ಸೌಲಭ್ಯ ಸಿಗಲಿದೆ..
ಜಿಲ್ಲೆಯಲ್ಲಿ ಅಗತ್ಯವಿರುವೆಡೆ ಆದ್ಯತೆ ನೀಡಿ ಶಾಲಾ ಮಕ್ಕಳ ಸಂಚಾರಕ್ಕೆ ಅನುಕೂಲವಾಗುವ ಹಾಗೆ ಬಸ್ ಸೌಲಭ್ಯಗಳಿಲ್ಲದ ಪ್ರದೇಶಗಳಿಗೆ ಸಾರ್ವಜನಿಕರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಉತ್ತಮ ಗುಣಮಟ್ಟದ ಬಸ್ಸುಗಳು ಸಂಚರಿಸುವಂತೆ ಶಾಸಕರಾಗಿ ತಮ್ಮ ಕ್ಷೇತ್ರದ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸಲಾಗಿತ್ತು..
ಬನ್ನಂಜೆಯ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದ ಮೂರು ಎಕರೆ ಜಾಗವನ್ನು, ಸರ್ಕಾರದ ಮಟ್ಟದಲ್ಲಿ ಸಾರಿಗೆ ಇಲಾಖೆಗೆ ಮುಖ್ಯಮಂತ್ರಿಗಳ ಮೂಲಕ ಹಸ್ತಾಂತರಮಾಡಿಸಿ 30 ಕೋಟಿ ರೂಪಾಯಿ ಅನುದಾನದಲ್ಲಿ ವ್ಯವಸ್ಥಿತ ರಾಜ್ಯ ಸರ್ಕಾರಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ..
ನಗರ ಸಾರಿಗೆ ಸಂಚಾರಕ್ಕೆ ಬಸ್ ಮಂಜೂರು ಮಾಡಿದರಷ್ಟೇ ಸಾಲದು ಅವುಗಳಿಗೆ ವ್ಯವಸ್ಥಿತ ನಿಲ್ದಾಣದ ಅವಶ್ಯಕತೆ ಇದೆ ಎನ್ನುವುದನ್ನು ಮನಗಂಡು ಶಿಕ್ಷಣ ಇಲಾಖೆಯ ಅಧೀನದಲ್ಲಿದ್ದು ಪಾಳು ಬಿದ್ದಿದ್ದ ಜಾಗಕ್ಕೆ ಬದಲಿ ಜಾಗವನ್ನು ಗುರುತಿಸಿ, ಅಭಿವೃದ್ದಿಗೆ ಅಗತ್ಯವಿದ್ದ 38 ಸೆಂಟ್ಸ್ ಸರ್ಕಾರಿ ಜಾಗವನ್ನ ಸಾರಿಗೆ ಇಲಾಖೆಗೆ ಹಸ್ತಾಂತರಗೊಳಿಸಿ ನಗರದ ಹೃದಯ ಭಾಗದಲ್ಲೇ 3 ಕೋಟಿ ರೂಪಾಯಿ ಅನುದಾನದಲ್ಲಿ ನಗರ ಸಾರಿಗೆ ನಿಲ್ದಾಣವನ್ನು ನಿರ್ಮಿಸಲು ಕ್ರಮವಹಿಸಿದ ಪ್ರಮೋದ್ ಮಧ್ವರಾಜ್ /
ಸರ್ಕಾರಿ ಬಸ್ ಗಳು ಮತ್ತು ಖಾಸಗಿ ಬಸ್ ಗಳು ಯಾಕೆ ಬೇಕು https://fb.watch/rTBjp99gOc