ಉಡುಪಿ ಜಿಲ್ಲೆಯ ಉಡುಪಿ ವಿಧಾನ ಸಭಾ ಕ್ಷೇತ್ರದ ಪೋಲಿಸ್ ಠಾಣೆಗಳಲ್ಲಿ(ಬ್ರಹ್ಮಾವರ, ಮಲ್ಪೆ ಮತ್ತು ಮಣಿಪಾಲ) ಹಳೇಯ ಜೀಪ್ ಗಳು ಗಸ್ತು ತಿರುಗುವದನ್ನು ಕಂಡು ಆ ಬಗ್ಗೆ ಪೋಲಿಸ್ ವರಿಷ್ಟಾಧಿಕಾರಿಯವರಲ್ಲಿ ಮಾಹಿತಿ ಪಡೆದು ತಕ್ಷಣ ಈ ಬಗ್ಗೆ ಸರ್ಕಾರದ ಗಮನ ಸೆಳೆದು ಕಾನೂನು ಸುವ್ಯವಸ್ಥೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿ, ಉಡುಪಿ ಪೋಲಿಸ್ ಇಲಾಖೆಗೆ 3 ನೂತನ ಮಾರುತಿ ಏರ್ಟಿಗಾ ವಾಹನವನ್ನು ಮಂಜೂರು ಮಾಡಿಸಲಾಗುತ್ತು.
ಇದಕ್ಕೂ ಮೊದಲು ಮಲ್ಪೆ ಎಸ್ ಐ ಪೋಲಿಸ್ ರವರ ಹಳೆಯ ಜೀಪ್ ನ್ನು ಬದಲಾಯಿಸಿ ನೂತನ ಜೀಪ್ ನ್ನು ಕೂಡ ಮಂಜುರು ಮಾಡಿಸಿಲಾಗಿತ್ತು.
ಅಂತೆಯೇ ಮಲ್ಪೆ ಯಲ್ಲಿ ಸಾವಿರಾರು ಮರದ ಮೀನುಗಾರಿಕಾ ಬೋಟ್ ಗಳಿದ್ದು , ಮರಗಳು , ಮನೆಗಳಿದ್ದು ಸುರಕ್ಷತೆಯ ದ್ರಷ್ಟಿಯಿಂದ ಹಳೇಯ ಅಗ್ನಿ ಶಾಮಕ ವಾಹನ ಬದಲಾಯಿಸಿ ನೂತನ ಅಗ್ನಿ ಶಾಮಕ ವಾಹನವನ್ನು ಮಂಜುರು ಮಾಡಲಾಗಿತ್ತು.
ಹಾಗೇಯೆ ನೂತನ 108 ಆಂಬ್ಯೂಲೆನ್ಸ್ ನ್ನು ಸರಕಾರದಿಂದ ಮಂಜುರು ಮಾಡಿಸಲಾಗಿತ್ತು…