ಕ್ರೀಡಾಪಟುಗಳ ಬೆಂಬಲಕ್ಕೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸದಾ ಪ್ರೋತ್ಸಾಹ ನೀಡಲಿದೆ : ಸಚಿವ ಪ್ರಮೋದ್ ಮಧ್ವರಾಜ್

ಎರಡನೇ ಟಿ-ಟ್ವೆಂಟಿ ಅಂಧರ ವಿಶ್ವ ಕಪ್ ಗೆದ್ದ ಇಬ್ಬರು ಕರ್ನಾಟಕದ ಕ್ರಿಕೆಟ್ ಕ್ರೀಡಾಪಟುಗಳಿಗೆ ಸರ್ಕಾರ ಏಳು ಲಕ್ಷ ಬಹುಮಾನದ ಜೊತೆಗೆ ಅವರಿಗೆ ಸರ್ಕಾರಿ ಕೆಲಸವನ್ನು ಸಹ ನೀಡಲಿದೆ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಕ್ರೀಡಾ ಇಲಾಖೆಯಲ್ಲಿ ಟಿ ಟ್ವೆಂಟಿ ವಿಶ್ವ ಕಪ್ ವಿಜೇತ ಕ್ರೀಡಾಪಟುಗಳಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತ ದೇಶ, ಪಾಕಿಸ್ತಾನದ ವಿರುದ್ಧ ಟಿ-ಟ್ವೆಂಟಿ ಅಂಧರ ವಿಶ್ವ ಕಪ್ ನನ್ನು 9 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.

ಈ ಪೈಕಿ ಕರ್ನಾಟಕದವರಾದ ಪ್ರಕಾಶ್ ಜಯರಾಮಯ್ಯ ಹಾಗೂ ಸುನಿಲ್ ನಾಡಿನ ಹಿರಿಮೆ ಹೆಚ್ಚಿಸಿದ್ದಾರೆ. ಈ ಇಬ್ಬರೂ ಸಹ ವಿಕಲಚೇತನರಿಗೆ ಸ್ಪೂರ್ತಿ. ಸರ್ಕಾರ ವಿಕಲಚೇತನರ ಕ್ರೀಡೆಗಳಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲು ಸಿದ್ಧ ಎಂದರು.

ಕಾರ್ಯಕ್ರಮದಲ್ಲಿ ಟಿ ಟ್ವಂಟಿ ಅಂಧರ ವಿಶ್ವಕಪ್ ಗೆದ್ದ ಎಲ್ಲಾ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿಕಲಚೇತನ ಅಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹದೇವ್, ಕ್ರೀಡಾ ಇಲಾಖೆ ನಿರ್ದೇಶಕರಾದ ಅನುಪಮ್ ಅಗರ್ವಾಲ, ಕ್ರಿಕೆಟ್ ಕೌನ್ಸಿಲ್ ‌ಮುಖ್ಯ ಕಾರ್ಯದರ್ಶಿಗಳಾದ ಜಾನ್ ಡೇವಿಡ್, ಭಾರತೀಯ ಅಂಧ ಕ್ರಿಕೆಟ್ ಟೀಮ್ ತರಬೇತುದಾರ ಪ್ಯಾಟ್ರಿಕ್ ರಾಜಕುಮಾರ್, ನಾಯಕ ಅಜಯ್ ಕುಮಾರ್ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

Latest Portfolio

Need Any Help? Or Looking For an Agent

Working Hours : Sun-monday, 09am-5pm
© 2022 Vankine. All Rights Reserved.