ಭಾರತ ದೇಶದಲ್ಲೇ ಪ್ರಥಮ ಬಾರಿಗೆ ಸುಸಜ್ಜಿತ ಮೀನುಗಾರ ಮಹಿಳೆಯರಿಗಾಗಿಯೆ ಉಡುಪಿಯಲ್ಲಿ ನಿರ್ಮಿಸಿದ ವಿಶಾಲವಾದ ಮಹಿಳಾ ಹೈಟೆಕ್ ಮೀನುಮಾರಾಟ ಕಟ್ಟಡವನ್ನು ಕರ್ನಾಟಕ ಸರ್ಕಾರದ 2.38ಕೋಟಿ ರೂಪಾಯಿ ಅನುದಾನದಲ್ಲಿ ಪ್ರಮೋದ್ ಮಧ್ವರಾಜ್ ರವರ ಮುತುವರ್ಜಿಯಲ್ಲಿ ನಿರ್ಮಿಸಲಾಗಿದೆ.
ಹಸಿ ಮೀನು ಹಾಗು ಒಣ ಮೀನು ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು ಎರಡು ಮಹಡಿ ಹೊಂದಿದೆ ಒಟ್ಟು ಸುಮಾರು 150ಕ್ಕೂ ಮಾರಾಟಕ್ಕೆ ಆಸೀನ ಕಲ್ಪಿಸಲಾಗಿದ್ದು ಕೊಳಚೆ ನೀರು ಹಾಗು ಇತರ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ…
ಗ್ರಾಹಕರ ಬೇಡಿಕೆಯಂತೆ ದಾಸ್ತಾನು ಇರಿಸಲು ವಿಶೇಷ ರೆಫ್ರಿಜರೇಷನ್ ಕೊಠಡಿಗೂ ಅವಕಾಶ ಕಲ್ಪಿಸಲಾಗಿದೆ…
ಮೀನು ಖರೀದಿಗೆ ಆಗಮಿಸುವ ಸಾರ್ವಜನಿಕರ ವಾಹನ ನಿಲುಗಡೆಗೆ ವಿಶಾಲ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ..